Tuesday, December 11, 2012

ಡಬ್ಬಿಂಗ್ ಬಗೆಗಿನ ಊಹಾಪೋಹಗಳ ನಡುವೆ ಕಳೆದು ಹೋಗದಿರಲಿ ಈ ದಿಟಗಳು

ಸಿನೆಮಾ ಒಂದು ಉದ್ಯಮ ಅಷ್ಟೇ ಅಲ್ಲ ಕಲಾಭಿವ್ಯಕ್ತಿ ಮಾಧ್ಯಮ:

ಸಿನೆಮಾ ಒಂದು ಕಲೆ ಅನ್ನೋದನ್ನ ನಾವು ಒಪ್ಕೋತೀನಿ, ಅದೇ ಉಸುರಿನಲ್ಲಿ ಅದು ಉದ್ಯಮವು ಹೌದು, ಕನ್ನಡ ಪ್ರೇಕ್ಷಕ ಬಿಟ್ಟಿಯಾಗಿ ಚಿತ್ರ ನೋಡೋದಿಲ್ಲ, ಟಿಕೆಟ್ ತಗೊಂಡೆ ನೋಡ್ತಾನೆ. ಹಾಡುಗಳ ಸಿಡಿ/ಕಾಸೆಟ್ ಗಳನ್ನೂ ನಮಗೆ ಯಾರು ದಾನವಾಗಿ ಕೊಡೋದಿಲ್ಲ. ಲಾಭ ನಷ್ಟದ ಲೆಕ್ಕಾಚಾರವಿಲ್ಲದೆ ಯಾವುದೇ ಚಿತ್ರ ತಯಾರಗೋದಿಲ್ಲ. ನಾವು ಗ್ರಾಹಕರು ನಮಗೆ ಇಷ್ಟವಾದುದನ್ನು ನೋಡ್ತೀವಿ ಬೇಡದನ್ನು ತಿರಸ್ಕರಿಸುತ್ತೀವಿ


'ಡಬ್ಬಿಂಗ್ ಬಂದರೆ ನಮ್ಮ ಕನ್ನಡ ಸಂಸ್ಕೃತಿ ಹಾಳಾಗುತ್ತೆ...' :

ಸಿನೆಮಾದಲ್ಲಿ ಬರೋದೆಲ್ಲ  ಕನ್ನಡ ಸಂಸ್ಕೃತಿ ಅಂತ ಕನ್ನಡ ಪ್ರೇಕ್ಷಕ ಅಂದುಕೊಳ್ಳುತ್ತಾನೆ ಅಂದರೆ ಅದು ಕನ್ನಡ ಪ್ರೇಕ್ಷಕನನ್ನು ಅವಮಾನಿಸಿದಂತೆ.ಕನ್ನಡ ಚಿತ್ರದ ಅಭಿಮಾನಿಗಳು ರೀಲ್ ಲೈಫ್ ಮತ್ತು ರಿಯಲ್ ಲೈಫ್ ನಡುವಿನ ವ್ಯತ್ಯಾಸ ಅರಿಯದಷ್ಟು ದಡ್ಡರಲ್ಲ. ಅಷ್ಟಕ್ಕೂ ಕನ್ನಡ ಚಿತ್ರದಲ್ಲಿ ಬರೋದೆಲ್ಲ ಕನ್ನಡ ಸಂಸ್ಕ್ರುತಿನಾ? ಕನ್ನಡದಲ್ಲಿ ಮಚ್ಚು ಲಾಂಗು, ರತಿ ಚಿತ್ರಗಳು ಸಹ ಬರುತ್ತವೆ ಹಾಗಂತ ಅಲ್ಲಿ ಬರೋದೆಲ್ಲ ಕನ್ನಡ ಸಂಸ್ಕೃತಿನ ಬಿಂಬಿಸುತ್ತೆ ಅನ್ನೋಕ್ಕಾಗುತ್ತಾ? ಹಾಗಂತ ರತಿ ಚಿತ್ರಗಳು ಮಾಡೋದು ತಪ್ಪು ಸರಿ ಅನ್ನೋ ವಿಮರ್ಶೆಗೆ ನಾನು ಹೊರಟಿಲ್ಲ, ಅಂತಹ ಚಿತ್ರಗಳನ್ನು ನೋಡುವ ಪ್ರೇಕ್ಷಕರು ಸಹ ಇದ್ದಾರೆ ಹಾಗಾಗಿ ಅಂತಹ ಚಿತ್ರಗಳು ತಯಾರಾಗುತ್ತವೆ ಅಷ್ಟೇ. ರಿಮೇಕ್ ಹೆಸರಲ್ಲಿ ಫ್ರೇಮ್ ಟು ಫ್ರೇಮ್ ಭಟ್ಟಿ ಇಳಿಸುವಾಗ  ಆಗದ ಕನ್ನಡ ಸಂಸ್ಕೃತಿ ನಾಶ ಒರಿಜಿನಲ್ ಆದ ಚಿತ್ರವೇ ಕನ್ನಡ ಮಾತಿನೊಂದಿಗೆ ಬಂದಾಗ ಆಗುತ್ತೆ ಅನ್ನೋ ವಾದ ನಾವು ಒಪ್ಪಬೇಕಾ?

ಕನ್ನಡದ ಸೃಜನಶೀಲತೆ ಹಾಳಾಗುತ್ತೆ:

ಇಂದಿನ ರಿಮೇಕ್ ಯುಗದಲ್ಲೂ ಸಹ ಗಿರೀಶ್ ಕಾಸರವಳ್ಳಿ ಅಂತಹ ನಿರ್ದೇಶಕರಿದ್ದಾರೆ. ಪುಟ್ಟಣ್ಣ ಕಣಗಾಲ್ ರಂತಹ ಮೇರು ನಿರ್ದೇಶಕರನ್ನು ನಮ್ಮ ಚಿತ್ರರಂಗ ಕಂಡಿದೆ. ಶಂಕರನಾಗ್ ಎಂಬ ಮಿನುಗುತಾರೆ ಹುಟ್ಟಿದ್ದು ನಮ್ಮಲ್ಲೇ. ಅಷ್ಟಕ್ಕೂ ಡಬ್ಬಿಂಗ್ ಅವಕಾಶ ಇರುವು ತಮಿಳು ತೆಲುಗು ಚಿತ್ರರಂಗದ ಸೃಜನಶೀಲತೆ ಯಾಕೆ ನಶಿಸಿಲ್ಲರಿಮೇಕ್ ಮಾಡುವ ಅವಕಾಶ ಕಡಿಮೆ ಆದಾಗ ಮಾತ್ರ ಸ್ವಂತವಾಗಿ ಯೋಚಿಸುವ, ಸೃಷ್ಟಿಸುವ ಮನಸ್ಸು ಬರೋದು. ಸ್ಪರ್ದೆ ಇದ್ದಾಗಲೇ ಗುಣಮಟ್ಟ ಸುದಾರಿಸೋದು. ಬೇಕೋ ಬೇಡವೋ ಜಾಗತೀಕರಣ ನಮ್ಮ ಎಲ್ಲ ರಂಗಕ್ಕೂ ಕಾಲಿಟ್ಟಿದೆ. ಬರಗಾಲವೋ ಮಳೆಗಾಲವೋ ನಾಡಿನ ಬಡ ರೈತ ಸಹ  ಜಗತ್ತಿನ ಉತ್ಪಾದನೆ ಜೊತೆ ಸ್ಪರ್ದೆ ಮಾಡಬೇಕಿದೆ, ಅವನು ಮಾಡುತ್ತಿದ್ದಾನೆ. ಬಡ ರೈತನಿಗೆ ಇಲ್ಲದ ಸವಲತ್ತು ಕನ್ನಡ ಚಿತ್ರರಂಗಕ್ಕೆ ಬೇಕಾ?

ಕನ್ನಡದ ಕಲಾವಿದರು ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಾರೆ:

ಇದೆ ಒಂದು ಅಂಶ ಸಾಕು ಚಿತ್ರರಂಗದವರ ದ್ವಂದ್ವ ನೀತಿ ಹಾಗು ಸ್ವಾರ್ಥವನ್ನು ನಿರೂಪಿಸಲಿಕ್ಕೆ. ಕಾರ್ಮಿಕರ ಬಗ್ಗೆ ಮಾತಾಡೋ ನೀವು ನಿಮ್ಮ ಚಿತ್ರಗಳನ್ನು ಬೇರೆ ಭಾಷೆ ಡಬ್ ಮಾಡೋದು ಯಾಕೆ? ಅಲ್ಲಿಯ ಕಾರ್ಮಿಕರ ಹೊಟ್ಟೆ ಮೇಲೆ ಹೊಡಿಯೋ ಕೆಲಸ ಯಾಕೆ ಮಾಡ್ತೀರಕನ್ನಡದ ಕಲಾವಿದರು ಕೆಲಸ ಕಳೆದುಕೊಳ್ಳುತಾರೆ ಅನ್ನೋದಾದ್ರೆ  - ಒಂದು ಕನ್ನಡ ಚಿತ್ರ ತಗೊಳ್ಳಿ, ನಾಯಕಿ - ಪರ ಭಾಷಿಕಳು, ವಿಲ್ಲನ್ - ಪರ ಭಾಷೆ, ಗಾಯನ - ಪರಭಾಷೆ. ಅವಕಾಶ ಬೇರೆ ಭಾಷಿಕರಿಗೆ ಹೋದಾಗ ನಮ್ಮ ಕಲಾವಿದರು ಕೆಲಸ ಕಳೆದುಕೊಲ್ಲಲ್ಲಿಲ್ಲವೇ?

ತೆಲುಗು ತಮಿಳಿನಲ್ಲಿ ಅವರ ಮಾರುಕಟ್ಟೆ ದೊಡ್ಡದಿದೆ ಹಾಗಾಗಿ ಅಲ್ಲಿ ಡಬ್ಬಿಂಗ್ ನಡಿಯುತ್ತೆ ಆದರೆ ಕನ್ನಡ ಚಿತ್ರಗಳದ್ದು ಸೀಮಿತ ಮಾರುಕಟ್ಟೆ:

ಈಗ ನೋಡಿ, ಮೊದಮೊದಲಿಗೆ ಚಿಕ್ಕಮಕ್ಕಳು ಕಾರ್ಟೂನ್ ಅನ್ನು ಬೇರೆ ಭಾಷೆಯಲ್ಲಿ ನೋಡ್ತಾವೆ, ನಂತರ ಡಿಸ್ಕವರಿ ನ್ಯಾಷನಲ್ ಜಿಯೋ ಅಂತಹ  ಚಾನಲ್ ಗಳನ್ನೂ ಬೇರೆ ಭಾಷೆಯಲ್ಲಿ ನೋಡುತ್ತಾರೆ, ಸುತ್ತಮುತ್ತಲಿನ ವಾತಾವರಣವೇ ಬೇರೆ ಭಾಷೆಯಿಂದ ಕೂಡಿರುವ ಪರಿಣಾಮವಾಗಿ  ಕನ್ನಡ ಎಂದರೆ ಅಪ್ರಯೋಜಕ ಎಂದು ಭಾವಿಸುವಕನ್ನಡದ ಬಗ್ಗೆ ಕೀಳರಿಮೆ ಬೆಳೆಸಿಕೊಂಡ, ಕನ್ನಡ ಚಿತ್ರಗಳನ್ನೇ ನೋಡದ  ಒಂದು ಜನಾಂಗ ಸೃಷ್ಟಿ ಆಗುತ್ತೆ. ಆಗ ರಿಮೇಕ್ ಮಾಡಿ ಅಥವಾ ಸ್ವಮೇಕ್ ಮಾಡಲಿ ಕನ್ನಡ ಚಿತ್ರಗಳಿಗೆ ಮಾರುಕಟ್ಟೆಯೇ ಇಲ್ಲವಾಗಿರುತ್ತದೆ. ತಮಿಳು ತೆಲುಗರಿಗೆ ಅವರ ಮಾರುಕಟ್ಟೆ ಇದ್ದಕಿದ್ದ ಹಾಗೆ ಹುಟ್ಟಿಕೊಂಡಿಲ್ಲ ರಾಮಾಯಣ ಮಹಾಭಾರತದಂತಹ ಜನಪ್ರಿಯ ಕಾರ್ಯಕ್ರಮಗಳು, ಜ್ಞಾನ ಸಂಬಂದಿ ಕಾರ್ಯಕ್ರಮಗಳು, ಟೈಟಾನಿಕ್, ಅವತಾರ್, ಸ್ಪೈಡರ್ ಮಾನ್  ನಂತಹ ಚಿತ್ರಗಳು ಸಹ ತಮಿಳಿನಲ್ಲಿ ದೊರೆಯುವಂತೆ ಮಾಡಿಕೊಂಡರು ಒಟ್ಟಾರೆಯಾಗಿ ಎಲ್ಲಡೆ ತಮ್ಮ ಭಾಷೆಯೇ ಸೌರ್ವಭೌಮತ್ವತೆ ಮೆರೆಯುವಂತೆ ಮಾಡಿದರು ಇದರ ಪರಿಣಾಮವಾಗಿ ನಮ್ಮ ಭಾಷೆಯಲ್ಲೇ ಎಲ್ಲಾ ಸಿಗುತ್ತಲ್ಲ ಬೇರೆ ಭಾಷೆ ಯಾಕೆ ಕಲೀಬೇಕು ಎಂಬ ನಂಬಿಕೆಯನ್ನು ಜನರು ಬೆಳೆಸಿಕೊಳ್ಳುವಂತಾಯಿತು ಇದರ ಪರಿಣಾಮವಾಗಿಯೇ ಇವತ್ತು ಅವರ ಮಾರುಕಟ್ಟೆ ವಿಸ್ತಾರವಾಗಿದೆ. ಆದರೆ ನಾವು? ಎಂದೋ ಮಾಡಬೇಕಿದ್ದ ಕೆಲಸವನ್ನು ಇವತ್ತಿಗೂ ಮಾಡಿಲ್ಲ ಮತ್ತು  ಅದೇ ರಾಗ ಹಾಡ್ತಾ ಇದೀವಿ.

ಡಬ್ಬಿಂಗ್ ಬಂದುದೇ ಆದರೆ ಒಳ್ಳಯೆದರ ಜೊತೆಗೆ ಜೊಳ್ಳು ಕೂಡ ಡಬ್ ಆಗಿ ಬರುತ್ತೆ:

ಕಾಳು ಅಥವಾ ಜೊಳ್ಳು ಅಂತ ತೀರ್ಮಾನಿಸಬೇಕಾದರೆ ನೋಡುವ ಪ್ರೇಕ್ಷಕನಿಗೆ ಅದು ಸಂಪೂರ್ಣ ಅರ್ಥವಾಗಬೇಕು. ಸಂಪೂರ್ಣ ಅರ್ಥವಾಗಬೇಕಾದರೆ ಅದು ತನಗೆ ಅರ್ಥ ಅಗೋ ಭಾಷೆಯಲ್ಲಿರಬೇಕು ಆಲ್ವಾ. ಅರ್ಥ ಆಗದ ಭಾಷೆಯಲ್ಲಿ ನೋಡಿ ಕಾಳನ್ನು ಜೊಳ್ಳು ಅಂತನೋ ಅಥವಾ ಜೊಳ್ಳನ್ನೇ ಕಾಳು ಅಂತ ತೀರ್ಮಾನಿಸಬಹುದಾದ ಅಪಾಯ ಇದೆ. ಉದಾ: ಇನ್ಸೆಪ್ಶನ್ ಚಿತ್ರವು ಅರ್ಥ ಆಗದೆ ಹೋದಾಗ..ಏನಪ್ಪಾ ಇದು ಅಂತ ಅನ್ನಿಸುತ್ತದೆ. ಅದೇ ಸಂಪೂರ್ಣ ಅರ್ಥವಾದಾಗ ಮಾತ್ರ ಒಂದು ಖಚಿತ ತೀರ್ಮಾನಕ್ಕೆ ಬರೋದು ಸಾದ್ಯ. ಇಲ್ಲದಿದ್ದರೆ ಅದು ಕನ್ನಡ ಬರದವನಿಗೆ ಕುವೆಂಪು ಸಾಹಿತ್ಯ ಕೊಟ್ಟು ವಿಮರ್ಶೆ ಬರಿ ಅಂತ ಹೇಳಿದಂತೆ.
`ಡರ್ಟಿ ಪಿಕ್ಚರ್' ರಿಮೇಕ್ ನಲ್ಲಿ ಪಾಕಿಸ್ತಾನದ ವೀಣಾ ಮಲ್ಲಿಕ್ ನಟಿಸ್ತಾ ಇದ್ದಾರೆ. ಡಬ್ಬಿಂಗ್ ಬಂದ್ರೆ ಸೃಜನಶೀಲತೆ ಹಾಳಾಗುತ್ತೆ, ನಮ್ಮ ಕಲಾವಿದರು ಕೆಲ್ಸ ಕಳೆದುಕೊಳ್ಳುತ್ತಾರೆ, ನಮ್ಮ ಸಂಸ್ಕೃತಿ ಎಕ್ಕುಟ್ಕೊಂಡು ಹೋಗುತ್ತೆ ಅನ್ನುವವರು ಈಗ ಉತ್ತರಿಸಬೇಕಿದೆ...ಹೇಳಿ - ಸೃಜನಶೀಲತೆ, ಕಲಾವಿದರ ಹೊಟ್ಟೆಪಾಡು ಮತ್ತು ಸಂಸ್ಕೃತಿ ಇವುಗಳಲ್ಲಿ ಯಾವುದಕ್ಕೆ ಚಿತ್ರ ಕೊಡುಗೆ ನೀಡಬಲ್ಲದು?

No comments: